ಮಂಗಳವಾರ, ಜುಲೈ 21, 2020

ಮಳಲಿ ಮಾವತ್ತೂರಿಗೆ ಬರದ ತಾರೆ…ಅಂ..ತಾರೆ. (ಅಲ್ಪನ-ಕಲ್ಪನೆ)

ಸಿಟಿಗಳಲ್ಲೇ ಹೀಗೆ. ಕಟ್ಟಿದ ದುಃಖದ ಕಟ್ಟೆ ಒಡೆಯೋದೇ ಎಂದೋ. ಕಟ್ಟೆ ಒಡೆಯಲೇ ಬೇಕೆಂದೂ ಬಯಸುವುದಿಲ್ಲ. ಯಾರೂ ಬಿಕ್ಕಿ ಅತ್ತುಬಿಡುವುದಿಲ್ಲ. ಬಾಯಿ ಬಡಿದುಕೊಳ್ಳೋದಿಲ್ಲ. ತಮಟೆ ಸದ್ದಿರುವುದಿಲ್ಲ. ಊರಿಗೆ ಊರು ಕಂಬನಿ ಮಿಡಿಯುವುದಿಲ್ಲ. ಎಲ್ಲರಿಗೂ ಎಲ್ಲವೂ ತಿಳಿದಿರುವುದಿಲ್ಲ. ಆದರೆ ಎಲ್ಲರಿಗೂ ಅವರವರ ತರಾತುರಿ. ಅವರದ್ದೇ ಹಪಾಹಪಿ. ಥರ್ಟಿಫಾರ್ಟಿ ಅಥವ ಸಿಕ್ಸ್ಟಿ ಫಾರ್ಟಿ ಅಥವ ಟ್ವೆಂಟಿಫೈವ್ ಥರ್ಟಿ ಇನ್ನೂ ಹೆಚ್ಚೆಂದ್ರೆ ಅಳಿದುಳಿದ ಹತ್ತಿಪ್ಪತ್ತು ಜಾಗದಲ್ಲೇ ಆಲೋಚನೆಗಳ ಗಿರ್ಕಿ ಸದ್ದು. ಎಲ್ಲರಿಗೂ ಯಾವುದೋ ಒಂದು ಚಾನೆಲ್ ಒಂದು ಸೀರಿಯಲ್ ಒಂದು ಸಂಗತ ಅಷ್ಟೆ. ಆದರೆ ಅಂದು ಸೇರಿದ್ದ ಆಪ್ತೇಷ್ಟರೆಲ್ಲರ ಕಣ್ಣಾಲಿ ತೊಯ್ದಿದ್ದವು. ಒಬ್ಬರಿಗೊಬ್ಬರು ಮಾತಾಗಿದ್ದರು. ಎಲ್ಲರೂ ಮಾತಿನ ಮನೆದೇವ್ರು ಮೇಷ್ಟುç ಬಳಗವೇ. ಮೈಸೂರಿನಲ್ಲಿ ಬೆಂಗಳೂರಿನಲ್ಲಿ ಧಾರವಾಡದಲ್ಲಿ ಕಳೆದಿದ್ದ ದಿನಗಳನ್ನ, ಕಬ್ಬಿಣದ ಕಡಲೆ ಎಂಬ ವಿಷಯವನ್ನು ಹೇಗೆ ಸಿಹಿಯಾಗಿಸುತ್ತಿದ್ದೋ ಎಂಬ ಸಂಗತಿಗಳನ್ನು ನೆನೆನೆನೆದು ಕಣ್ಣೀರನ್ನು ಇಂಗಿಸಿಕೊಳ್ಳುತ್ತಿದ್ದರು ಗೆಳತಿಯರಾದ ಶಾರದೆ, ಜಯ, ತೇಜು, ರಾಜು, ಅನಂತು ಎಲ್ಲರೂ
ಬಂದ ಬಂದವರ ಕೈಯಲ್ಲಿ ಒಂದು ಹಾರ. ಒಂದು ಪ್ಲಾಸ್ಟಿಕ್ ಚೀಲ. ತನ್ನ ಮಗ್ಗುಲಿಗೆ ಸೇರುತ್ತಿದ್ದ ಪ್ಲಾಸ್ಟಿಕ್ ಚೀಲ ಕಂಡ ನಂದಿ ಬಟ್ಟಲ ಗಿಡ ನಿನ್ನಿಂದೇನು ನನಗೆ ಎನ್ನುವಂತೆಯೇ ನಿಮ್ಮಿಂದೇನು ನನಗೆ ಎನ್ನುವ ಸ್ಥಿತಿಯಲ್ಲಿದ್ದಳು ಮಗಳು. ಒಬ್ಬಳೇ ಮಗಳು. ಬತ್ತಿ ಹೋದ ಕಣ್ಣಿನಿಂದ ಹತ್ತಿಯೂ ನೋಡದ ಕಣ್ಣೀgರು ತಳÀದಲ್ಲೇ ಲಾಸ್ಯವಾಡುತ್ತಿತ್ತು. ಆಗಷ್ಟೇ ಕಂಪೆನಿಯ ಪಾಲಾಗಿದ್ದವಳವಳು. ತನ್ನ ಕಾಲ ಮೇಲೆ ತಾ ನಿಲ್ಲುವ ಭರವಸೆ ಚಿಗುರುತ್ತಿತ್ತು. ಇದಕ್ಕೆಲ್ಲಾ ಬೀಜಾಂಕುರಗೈದಿದ್ದ ತನ್ನ ಬಾಳ ಬೆಳಕೇ ನಂದಿ ಹೋಗುತ್ತದೆಂದು ಆಕೆ ಎಂದೂ ಎಣಿಸಿರಲಿಲ್ಲ. ಎಂದಿನAತೆ ಬೆಳಿಗ್ಗೆ ಬಸ್ಗೆಂದು ಬಿಟ್ಟು ಬಂದಿದ್ದಳು. ಹಾಗೆ ಕೈ ಬೀಸಿ ಹತ್ತಿಸಿಕೊಂಡ ಬಸ್ಸು ಮತ್ತೆ ಇಳಿಸದೆ ಹೋದದ್ದನ್ನು ನೆನೆದು ಇನ್ನೆಷ್ಟು ದಿನ ಮಗಳು ಜಾಗರಣೆ ಮಾಡಿಯಾಳೋ ಏನೋ.
ಅಂತು ಮನೆ ಒಳಗಿದ್ದ ಆಪ್ತರು ಬರುವಿಕೆಗಾಗಿ ಕಾದಿದ್ದರು. ಹುಟ್ಟಿನಿಂದಲೇ ಅಂಟಿಕೊಳ್ಳುವ ಸೂತಕದ ಜಾತಿ ಸಾವಿನಲ್ಲೂ ಬಿಡದೆ ಕಾದು ಸೋತ ಕಣ್ಣ ಜಾತಿ ಹೇಳಿ ಸೂರ್ಯ ಮುಳುಗುತ್ತಿದ್ದಾನೆ. ಘಾಟ್ ಗೆ ಬರಲು ಹೇಳಿ ಅವರಿಗೆಎಂದು ಹೇಳುತ್ತಿದ್ದವರ ಮಾತಿಗೆ ಹೌದೌದು ಎನ್ನುವರೇ ಎಲ್ಲಾ, ನಾನಂತೂ ಘಾಟ್ಗೆ ಪಾದ ಬೆಳೆಸಲಿಲ್ಲ. ಊರಿಗೆ ಬರಬೇಕಿತ್ತು. ಅದಕ್ಕಿಂತಲೂ ಘಾಟ್- ದಿನ-ಜೀವಯಾನ-ಕರಗಿ ಹೋದ ಕ್ಷಣ-ಸಾಕೆನಿಸಿತ್ತು ಬದುಕು. ಇಲ್ಲಿಯೂ ಹಾಗೆ ಎನಿಸಿದರೂ ನಂಬಿಕೊAಡು ಬಂದವಳು ತುಂಬಿದ ೩೦ವರ್ಷ ಕೈ ಹಿಡಿದವಳು. ಜಾತಿ ವಿಜಾತಿ ಎನ್ನದೆ ಅಂಟಿಕೊAಡವಳ ಪ್ರೀತಿಯ ನಂಟದು. ಋಣ ಸಂದಾಯದ ಜಮೆ ಮಾಡಿದವಳಂತೆ ಕಾಣುತ್ತಿದ್ದ ಮಗಳನ್ನು ನೆನೆದು ನೆನೆದು ಕೃಶವಾಗುತ್ತಿದ್ದ ಯಜಮಾನರು ಗಟ್ಟಿಯಾಗೊಮ್ಮೆ ಮಗಳನ್ನು ಅಪ್ಪಿಕೊಂಡು ತಾರಾಎಂದಾಗ ಅದೆಷ್ಟೋ ಸಾವಿರ ಸಾವಿರ ಬಳಗಕ್ಕೆ ಬುದ್ದಿ ಹೇಳಿ ಹೇಳಿ ಮಾಗಿದ್ದ ಮನಸುಗಳೆಲ್ಲವೂ ಬೀಸು ಗಾಳಿಗೆ ಮರಗಳಿಂದ ಬಿದ್ದ ಮಳೆಹನಿಯಂತಾದವು
ಮಧ್ಯಾಹ್ನ ತುಂಬಿ ತುಳುಕಿದ್ದ ಆಸ್ಪತ್ರೆ ಆವರಣದಲ್ಲಿ ಜನವೋ ಜನ. ಹೆಡ್ ಮೇಡಂ ಅಂತೆ. ಬಾಳ ಒಳ್ಳೇವ್ರಂತೆ. ಬ್ರಾಮಣ್ರಂತೆ. ಸೈಡ್ ಹೊಡೆಯೋಕೋಗಿ ಚಕ್ರಕ್ಕೆ ಸಿಕ್ಕಾಕೊಂಡ್ರAತೆ. ಮೇಲೆ ಹರಿದುಬಿಟ್ಟದೆ ಕಣ್ಲಾ. ನೋಡೋಕಾಯ್ತಿರಲಿಲ್ಲ. ಅಯ್ಯೋ..!!?? ಎಂದು ಒಬ್ಬೊಬ್ಬರ ಬಾಯಲ್ಲೂ ಮಿಂದು ಬರುತ್ತಿದ್ದ ಮಾತುಗಳು ಹಲವು ದೃಶ್ಯಕಟ್ಟಿಕೊಡುತ್ತಿದ್ದವು. ಹಣ ಹಣ್ಣು ಬಿಡುವ ಕಾಲಕ್ಕೆ ಸುಗ್ಗಿ ಎಂದು ಹಿಗ್ಗಿ ಹೊರಟಿದ್ದರು ಮೇಡಂ ತಾವು ಕಟ್ಟಿದ್ದ ಜೀವ ವಿಮೆ ಹಣದ ಚೆಕ್ಕು ಕೈ ಸೇರಿದ ಮೇಲೆ ಮಗಳಿಗೆ, ಪತಿಗೆ ಏನೇನು ಮಾಡಬೇಕು ? ತಾನು ಯಾವುದಕ್ಕೆಲ್ಲಾ ಹಣ ಖರ್ಚು ಮಾಡಲಿ ? ಎಂಬಿತ್ಯಾದಿಯಾಗಿ ಹಾಕಿದ್ದ ಲೆಕ್ಕಾಚಾರ ಪಾಸಾಗಲಿಲ್ಲ. ದಿನವಷ್ಟೇ ಅಲ್ಲ. ಹಿಂದಿನ ಕೆಲ ದಿನಗಳಲ್ಲೂ ಗಣಿತ ಬೋಧಿಸುವ ಮೇಡಂರವರ ಲೆಕ್ಕಾಚಾರ ಪಾಸಾಗಿರಲಿಲ್ಲ. ಮಕ್ಕಳೆಲ್ಲರ ಪಾಲಿನ ಪ್ರೇರಣೆ ಹೊಣೆ ಹೊತ್ತಿದ್ದ ಮೇಡಂ ದಿನದ ಮಾಥ್ ಮೆಟಿಕ್ಸ್ನಲ್ಲಿ ನಿರೀಕ್ಷಿಸಿದಷ್ಟು ಅಂಕ ಪಡೆದಿರಲಿಲ್ಲ. ಉಸ್ತುವಾರಿ ಹೊಣೆ ಹೊತ್ತಿದ್ದವರೆಲ್ಲಾ ಇವರ್ಯಾರನ್ನೋ ಕರೆಸವ್ರೆ ಕಣ್ರೋ ಅಂತಿದ್ದದ್ದು ಕಿವಿ ಮೇಲೆ ಬಿದ್ದು ಬಹಳ ಬೇಸರಗೊಂಡಿದ್ದರು ತಾರಾ. ಯಾವ ಪ್ರೊಬೇಷನರಿ ಅಧಿಕಾರಿಗಳಿಗೂ ಕಡಿಮೆ ಇಲ್ಲದಂತೆ ಶಾಲೆ ಬೆಳೆಸಬೇಕೆಂಬುದು ಅವರ ಒಳ ತುಡಿತ. ಶಾಲೆಯ ಆವರಣದಲ್ಲೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡಲು ಬಳಸುತ್ತಿದ್ದ ಹೊಂಡಾ ಆಕ್ಟಿವಾ ಮೇಡಂರಷ್ಟೇ ಆಕ್ಟೀವ್ ಆಗಿತ್ತು. ತನ್ನೂರಿಗೂ ತಾಲೂಕಿಗೂ ನಿತ್ಯ ರಥವಾಗಿದ್ದ ಸ್ಕೂಟ್ರು ಬಗ್ಗೆ ಮೇಡಂಗೆ ಹೆಮ್ಮೆ. ಯಾಕಂದ್ರೆ ಒಂದಿನಾನೂ ನನಗೆ ಕೈ ಕೊಟ್ಟಿಲ್ಲ ಕಣೆ ಮಲ್ಲಿಕಾ ಎನ್ನುವಾಗ ಅವರಲ್ಲಿ ಅರಳುತ್ತಿದ್ದ ಕಣ್ಣುಗಳು ತನ್ನ ರಥದ ಬಗೆಗಿನ ನಂಟನ್ನು ಗಟ್ಟಿಗೊಳಿಸುತ್ತಿತ್ತು. ಅವರ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತಿತ್ತು.
ದಿನ ಮಕ್ಕಳಿಗೆ ಆಶ್ಚರ್ಯ. ಇದೇನಿದು ನಮ್ಮ ಹೆಡ್ ಮೇಡಂ ನಮ್ ಕ್ಲಾಸ್ಗೆ ಬಂದುಬಿಟ್ರು ಅಂತ. ರೂಂಗೆ ಬರುವ ಮುಂಚೆಯೇ ನಂದಿ ಹತ್ತಿರ ನಾಳಿನ ಮಹಿಳಾ ದಿನಾಚರಣೆ ಸೋಮವಾರ ಮಾಡೋಣ ಅಂದಿದ್ರು. ಅದು ಹೇಗೆ ನಡೆಸಬೇಕೆಂದು ಹೇಳಿದ್ದರೋ ಅದನ್ನ ಪುನರುಚ್ಚಿರಿಸಿದ್ದರು. ತಾವೇ ವಿಡಿಯೋ ಪ್ರೆಸೆಂಟೇಷನ್ಗೆ ಪ್ಲಾನ್ ಮಾಡಿದ್ದರು. ಅದನ್ನು ವಿಡಿಯೋ ಮಾಡಿಸಿ ಗ್ರೂಪ್ಗಳಿಗೆ ಹಾಕಬೇಕೆಂಬ ಹಂಬಲವಿತ್ತು. ಮಹಿಳಾ ದಿನದ ವಿಶೇಷಕ್ಕೆ ರೆಡಿ ಆಗುವಾಗ ತಾನು ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗಿದ್ದನ್ನು ನೆನೆದು ಕಣ್ತುಂಬಿದ್ದವು. ದೇವನೊಲಿದಾತನನ್ನ ಮೆಚ್ಚಿ ಕೈ ಹಿಡಿವಾಗ, ತನ್ನವರೆಲ್ಲರನ್ನು ದೂರ ಮಾಡಿಕೊಂಡಾಗ, ನೆರವಿಗೆ ಯಾರೂ ಬಾರದಿದ್ದಾಗ, ಹತ್ತಿರವಿದ್ದೂ ದೂರ ನಿಂತ ತನ್ನವರ ಹೆಸರುಗಳನ್ನು ತುಟಿ ತುದಿಗೆ ತಂದುಕೊAಡಾಗ, ಅಪ್ಪ-ಅಮ್ಮ ಬಂಧು ಬಳಗ, ಜನನ, ಬಾಲ್ಯವೆಲ್ಲವೂ ಪ್ರಾತಃಸ್ಮರಣೀಯ ಎಂದು ತಮಗೆ ತಾವೇ ಗಟ್ಟಿಗಿತ್ತಿಯಾದ ತಾರ ದಿನ ಮಕ್ಕಳಿಗೆ ಚಲನೆ ಪಾಠ ಶುರು ಮಾಡಿದ್ದರು. ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆಯುವುದು ಚಲನೆ. ನಿಂತ ಸ್ಥಳದಿಂದ ದೂರ ಕ್ರಮಿಸಿದರೆ ಅದು ಚಲನೆ. ಚಲನೆ ಎಂದರೇನು ಎಂಬ ಪ್ರಶ್ನೆಗೆ ಅದು ಸಹಜ ವಿದ್ಯಾಮಾನ ಎಂದು ಶುರು ಮಾಡಿದ ಮೇಡಂ ಕೊಟ್ಟ ಉದಾಹರಣೆಗಳೆಲ್ಲಾ ಮಕ್ಕಳಿಗೆ ಹಿಡಿಸಿದವು. ಮಕ್ಕಳು ಖುಷಿಪಟ್ಟರು. ದಿನಾಲೂ ಬನ್ನಿ ಮೇಂ ಅಂದರು. ಆದರೆ ಪೂರ್ಣ ಪಾಠ ನಾನೇ ಮುಗಿಸುತ್ತೇನೆ ಎಂದು ಹೇಳಿದ ತಾರಾಗೆ ಕೆಜಿಐಡಿ ಕಚೇರಿ ನೆನಪಾಯಿತು. ದಿನ ಬೇಗ ಹೊgಡಬೇಕೆಂದುಕೊAಡವಳು’ ಎಂದು ತರಗತಿಯಿಂದ ಹೊರ ನಡೆದರು

ನಾಗೇಂದ್ರ ಮಾಷ್ಟçನ್ನು ಕರೆದು ಹೊರಡುವುದಾಗಿ ತಿಳಿಸಿದರು. ನಂದೀಶರನ್ನು ಕರೆದು ಭಾನುವಾರ ವಿಶೇಷ ತರಗತಿ ತಪ್ಪದೇ ನಡೆಸಲು ತಿಳಿಸಿದ್ರು. ಮಕ್ಕಳ ಹತ್ರ ಹೋಗಿ ನಾಳೆ ಯಾರಾದ್ರು ಬರೆದೇ ಹೋದ್ರೆ ಹೆಸರು ಬರೆದುಕೊಳ್ರೋ ಎಂದು ಲೀಡರ್ಗೆ ಹೇಳಿದ್ರು. ಸರಿ ಡಿಢೀರ್ನೆ ಹೊರಟೇ ಬಿಟ್ರು. ಆಕ್ಟೀವ್ ಆಗಿದ್ದ ಆಕ್ಟೀವಾ ಅವರನ್ನು ಹೊತ್ತು ಮಳಲಿ ಬಿಟ್ಟು ಹೊರಟಿತ್ತು. ದಾರಿಯಲ್ಲಿ ಸಿಕ್ಕವರೆಲ್ಲಾ ಮುಖ ಕಂಡವರೆಲ್ಲಾ ಮೇಡಂಗೆ ನಮಸ್ಕರಿಸುತ್ತಿದ್ದರು. ಪ್ರತಿ ನಮಸ್ಕಾರಕ್ಕೆ ತಲೆ ಬಾಗಿಸುತ್ತಿದ್ದ ಮೇಡಂ ಗೌಡೇನಹಳ್ಳಿ ದಾಟಿ ದಿಬ್ಬ ಬರುತ್ತಿದ್ದಂತೆ ನಿಧಾನವಾಗಿ ಚಲಿಸುತ್ತಿದ್ದ ಬಸ್ ಕಂಡು ಉರಿದರು. ಬೇಗನೇ ಹೋಗೋದಿಲ್ಲಾ ಸೈಡು ಕೊಡಲ್ಲ ಎಂದು ಗೊಣಗಿದರು. ಅದಾಗಲೇ ೧೧.೧೦ ಆಗಿತ್ತು. ೧೧.೩೦ ಕೆ.ಆರ್.ನಗರ ತಲುಪಿದರೆ ೧೨.೩೦ ಅಥವ ೧೨.೪೫ಕ್ಕೆಲ್ಲಾ ಮೈಸೂರು ತಲುಪಬಹುದು ಎಂದುಕೊAಡರು. ಕೆ.ಜಿ..ಡಿ ಕಚೇರಿಗೆ ಹೋಗುವ ತಮ್ಮ ಪ್ಲಾನ್ನ್ನು ಸ್ನೇಹಿತೆ ಜಯಗೆ ಹೇಳಿದ್ದರು. ಕೆಲಸ ಮುಗಿಸಿ ಬೇಗ ಬಂದು ಬಿಡು ಎಂದಿದ್ದರು. ಅದನ್ನು ನೆನೆಸಿಕೊಂಡ ತಾರಾ ಜಯಗೆ ಫೋನ್ ಮಾಡಬೇಕೆಂದುಕೊAಡರೂ ಕೆ.ಆರ್.ನಗರಕ್ಕೆ ಹೋದ ಮೇಲೆ ಮಾಡೋಣ ಎಂದು ಎಣಿಸಿ, ಬಸ್ ಹಿಂದಿನಿAದಲೇ ಹಾರ್ನ್ ಮಾಡಿದರು. ಪದೇ ಹಾರ್ನ್ ಮಾಡಿದರು. ಥೂಎನ್ನುತ್ತಾ ಬಸ್ನ್ನು  ಹಿಂದಿಕ್ಕಿ ಹೋಗುವ ಮನಸು ಮಾಡಿಯೇಬಟ್ಟರು. ಕೈಗಳಿಗೆ ಹಾಕಿದ್ದ ಗ್ಲೌಸ್ ಎಕ್ಸ್ಲೇಟರ್ನ್ನು ತಿರುಗಿಸುತ್ತಲೇ ಮುನ್ನುಗ್ಗಿತು. ಅದ್ಯಾವುದೋ ತರಾತುರಿಯಲ್ಲಿ ಎದುರಿನಿಂದ ಬರುತ್ತಿದ್ದ ಇಬ್ಬರೂ ಸ್ಕೂಟರ್ ವೇಗ ಕಡಿಮೆ ಮಾಡುವಷ್ಟರಲ್ಲಿ ಇವರಿಗೆ ಗಾಬರಿ. ಎಡಕ್ಕೆ ಬಸ್ ಇದೆ. ಎದುರು ಸ್ಕೂಟರ್ ಇದೆ. ತನ್ನ ಆಕ್ಟೀವಾ ಬಹಳ ವೇಗದಲ್ಲಿದೆ. ಬಸ್ ಧಾಟಿ ಮುಂದೆ ಹೋಗೋಕೆ ಇನ್ನೇನು ಸ್ಕೂಟರ್ ಬಂದೇ ಬಿಡುತ್ತೆ. ನಿಧಾನವಾದರೆ ಬಸ್ಗೆ ಸೈಡು ಕೊಡಬೇಕಾಗುತ್ತೆ. ನಾನ್ಯಾವತ್ತೂ ಬೇರೆಯವರಿಗೆ ಬಿಟ್ಟುಕೊಟ್ಟವಳ್ಳಲ್ಲ ಎಂಬಿತ್ಯಾದಿ ತಳಮಳಗಳ ಸರಮಾಲೆ ತಲೆಯಲ್ಲಿ ಸುಳಿದು ಹೊಯ್ತು. ಅರೆಕ್ಷಣದಲ್ಲಿ ಗಾಬರಿ, ಭಯ ಇದಕ್ಕೆ ಬೆಂಬಲಿಸಿಯೋ ಕಾಲುಗಳು ಚಡಪಡಿಸಿದವು. ನೆಲಕೆ ತಾಗದ ಅವು ಓಲಾಡಿ ಓಲಾಡಿ ಎಡ ಬಸ್ಸಿಗೆ ಢಿಕ್ಕಿ ಹೊಡೆದೇ ಬಿಟ್ಟಿತು ಆಕ್ಟೀವಾ. ಅಯ್ಯೋ….ಎಂದು ಜನ ಕೂಗಿಕೊಳ್ಳುವಷ್ಟರಲ್ಲಿ ಬಸ್ ಹಿಂದಿನ ಚಕ್ರ ಚಲನೆ ಮಾಡಿಯೇ ಬಿಟ್ಟಿತ್ತು. Uತ್ಗಿಗೆ ಬೆಳಕನೀವ ಗರ್ಭಗುಡಿಯ ದೇಗುಲದ ಮೇಲೆ ಹರಿದೇ ಬಿಟ್ಟಿತ್ತು ಬಸ್ಸು. ಕ್ಷಣಮಾತ್ರದಲ್ಲಿ ಗುಡಿಯಲ್ಲಿದ್ದ ಭಗವಂತ ತನ್ನ ಲೋಕಕ್ಕೆ ಜಿಗಿದೇ ಬಿಟ್ಟ. ಆತ್ಮ ಪರಮಾತ್ಮನಲ್ಲಿ ಸೇರಿಯೇ ಬಿಟ್ಟಿತು. ಎದುರು ಬರುತ್ತಿದ್ದ ಸ್ಕೂಟರ್ನವರು, ಬಸ್ನಲ್ಲಿದ್ದ ಜನ, ಡ್ರೆöÊವರಣ್ಣ  ಪಕ್ಕದ ಹೊಲದಲ್ಲಿದ್ದ ಜನ, ಎಲ್ಲರೂ ಓಡಿ ಬಂದರು. ನಿತ್ಯ ಪಯಣಿಸುತ್ತಿದ್ದ ರಸ್ತೆಯಲ್ಲೇ ಶಾಶ್ವತ ಚಲನೆ ಇಲ್ಲದೇ ಮಲಗಿದ್ದರು ಮೇಡಂ. ಸೋಮವಾರ ಮಹಿಳಾ ದಿನಾಚರಣೆಯಲ್ಲಿ ಇವರ ಭಾವಚಿತ್ರವೇ ಮೇರು ಸ್ಥಾನ ಪಡೆದಿದ್ದರೂ, ಭಿಭತ್ಸ ದೃಶ್ಯಗಳೇ ಎಲ್ಲರ ತುಂಬಿದ ಹೃದಯದಲ್ಲೂ ಚಿರಸ್ಥಾಯಿ.